ಪ್ರತಿಷ್ಠಿತ ನಾಮಧಾರಿ ಸಮುದಾಯದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳೇ, ಹಿರಿ ಕಿರಿಯ ಸಮುದಾಯ ಬಾಂಧವರೆ ,
ಸಮೃದ್ದ ಸಮಾಜ ನಮ್ಮದು. ಸ್ವಾತಂತ್ರ್ಯ ಪೂರ್ವದಲ್ಲಿಯೇ 1931 ರಲ್ಲಿ ಸಿದ್ದಾಪುರದ ಕೋಲ್ ಸಿರ್ಸಿಯಲ್ಲಿ ನಾಮಧಾರಿ ಸಮುದಾಯದ ಪ್ರಥಮ ಸಮ್ಮೇಳನ ಮಾನ್ಯ ಗೋವಿಂದ ಪುಟ್ಟಯ್ಯ ನಾಯ್ಕರ ಅಧ್ಯಕ್ಷತೆಯಲ್ಲಿ ವಿಜ್ರಂಭಣೆಯಿಂದ ನಡೆದಿದೆ.
ಮರುವರ್ಷವೂ ಸಾಗರದ ಮರತ್ತೂರು ಗ್ರಾಮದಲ್ಲಿ ನಡೆದಿದೆ. ಇದನ್ನು ಗ್ರಹಿಸಿದ ಪ್ರತಿಷ್ಠಿತ ಒಂದು ಸಮಾಜ 15 ವರ್ಷಗಳ ನಂತರ ವಿಶ್ವಮಟ್ಟದ ಹೆಸರಿನಲ್ಲಿ ಸಂಘ ಸ್ಥಾಪನೆ ಮಾಡಿ ಕೊಳ್ಳುತ್ತದೆ. ಬಿಲಿಯನ್ ಲೆಕ್ಕದ ಆಸ್ತಿ ಮಾಡುತ್ತದೆ. 2020 ರಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತದೆ. ಆದರೆ ಹಿರಿಯರು ಹಾಕಿದ ಅಡಿಪಾಯ ಶಿಥಿಲವಾಗಿದ್ದು ಹೇಗೆ? ಎಂಬುದರ ಬಗ್ಗೆ ಆತ್ಮ ಅವಲೋಕನ ಮಾಡಿ ಕೊಳ್ಳಲೇಬೇಕು.ಸಮುದಾಯದ ಸ್ವಾಸ್ಥ್ಯ ವನ್ನು ಕಾಪಾಡಲು ಎಷ್ಟು ಬೇಗ ಕಟಿ ಬದ್ಧರಾಗುತ್ತೇವೋ ಅಷ್ಟು ಒಳ್ಳೆದು!
ಗ್ಲೋಬಲ್ ನಾಮಧಾರಿ ಸಂಘದ ಚಿಂತನೆಯ ಪ್ರಸ್ತಾಪಕ್ಕೆ 2021ರಲ್ಲಿ ಅಧಿಕಾರದಲ್ಲಿದ್ದ ಸಮಾಜದ ಎಲ್ಲ ಸಂಘ ಸಂಸ್ಥೆಗಳು, ಹಾಗೂ ಅನೇಕ ಹಿರಿ ಕಿರಿಯ ಸಮುದಾಯ ಬಾಂಧವರ ಬೆಂಬಲ ದಿಂದ ಸಂಘವನ್ನು ನೊಂದಣಿ ಮಾಡಿಸಿರುವೆವು. "ಸಮುದಾಯದ ವಿಶ್ವಮಟ್ಟದ ಸಂಪರ್ಕ ಹಾಗೂ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ
ಬೆಂಬಲ, ಸಮುದಾಯದ ಅಸ್ಮಿತೆಗಾಗಿ ಎಲ್ಲರ ಸಹಭಾಗಿತ್ವದಲ್ಲಿ ವಿಶ್ವ ಸಮ್ಮೇಳನ ಆಯೋಜಿಸುವುದು ಉದ್ದೇಶವಾಗಿದೆ" .
ಬಾಂಧವರೆ ಅಡಿಪಾಯ ಹಾಕಿರುವೆವು ಇದನ್ನು ಬೆಳೆಸುವುದು ಎಲ್ಲರ ಕರ್ತವ್ಯ! ಸಂಘ ಶಕ್ತಿ ದಿವ್ಯ ಶಕ್ತಿ!
1. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಗೌರವ ದಿಂದ ಕಾಣೋಣ. ರಾಗ ಧ್ವೇಷ ಬದಿಗೊತ್ತಿ ಶಾಂತಿ ಸೌಹಾರ್ಧತೆ ಮೆರೆಯೋಣ. ಪುಟಿದೆದ್ದು ಸಮಾಜದ ಗೌರವವನ್ನು ಹೆಚ್ಚಿಸೋಣ.
2. ಗ್ಲೋಬಲ್ ನಾಮಧಾರಿ ಸಂಘ ಈಗ ತಾನೆ ಅಂಬೆಗಾಲಿಡು ತ್ತಿರುವ ಸಂಘ. ಇದನ್ನು ಪ್ರೀತಿಯಿಂದ ಬೆಳೆಸುವ ಪ್ರಯತ್ನ ಮಾಡಿ ( ಉತ್ತಮ ಸಲಹೆ ಸೂಚನೆ ನೀಡಿ, ಕೈಲಾದವರು ದೇವರಿಗೆ ಸಮರ್ಪಿಸಿ ದಂತೆ ನಿಸ್ವಾರ್ಥ ವಾಗಿ ಕಿರು ಕಾಣಿಕೆ ಸಮಾಜಕ್ಕೆನೀಡಿ, ಸದಸ್ಯರಾಗಿ, ಶೈಕ್ಷಣಿಕ ದತ್ತಿ , ದಾನ ನೀಡಿ ಬೆಳಸಬೇಕಾಗಿ ನಮ್ರ ವಿನಂತಿ) ಈಗಾಗಲೆ ಸಂಪೂರ್ಣ ಉಚಿತವಾಗಿ ವೆಬ್ ಸೈಟ ಸೇವೆಯನ್ನು ಪೂರೈಸಿದ ಸಂಸ್ಥಾಪಕ ಉಪಾ ಧ್ಯಕ್ಷರಾದ ಶ್ರೀ ಹರೀಶ ಕೇಶವ ನಾಯ್ಕ ಬೆಂಗಳೂರು ರವರಿಗೆ, ಧರ್ಮಾರ್ಥ ನಿಧಿಗೆ ಕೈಜೋಡಿಸಿದ ಧರ್ಮಾತ್ಮರಿಗೆ, ವಿವಿಧ ಸದಸ್ಯತ್ವ ಪಡೆದ ಮಹಾತ್ಮರಿಗೆ , ಸಂಘವನ್ನು ಬೆಳಸಲಿರುವ ಗೌರವಾನ್ವಿತರಿಗೆ ಅಭಿನಂದನೆಗಳು.
ಸಂಸ್ಥಾಪಕ ಸದಸ್ಯರ ಪರವಾಗಿ
ಶ್ರೀ ರಾಮಚಂದ್ರ ಈ ನಾಯ್ಕ.
ಕಾರ್ಯದರ್ಶಿಗಳು.

